ಮುಂಬೈ: ಅತ್ಯಾಚಾರಿ ಬಾಬಾ ರಾಮ್ ರಹೀಮ್ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಬಾಬಾ ರಾಮ್ ರಹೀಂ ಗೆ ಸಂಬಂಧಸಿದ ಸಿನಿಮಾ ಪರವಾನಗಿಯನ್ನು ಸಿನಿಮಾ, ಟಿವಿ ನಟ ಹಾಗೂ ನಿರ್ದೇಶಕರ ಸಂಘ ರದ್ದು ಮಾಡಿದೆ.
ಈ ಹಿಂದೆ ಎಂಎಸ್ ಜಿ, ಎಂಎಸ್ ಜಿ-2 ಚಿತ್ರಗಳು ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಬಾಬಾ ರಾಮ್ ರಹೀಂ ಅವರ ಪರವಾನಗಿಯನ್ನು ರದ್ದು ಮಾಡಿರುವುದಾಗಿ ಸಿನಿಮಾ, ಟಿವಿ ನಟ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ತಮ್ಮ ಚಿತ್ರಗಳಿಗೆ ತಾವೇ ಸಾಹಿತ್ಯ, ಸಂಗೀತ, ನಿರ್ದೇಶನ ಸೇರಿದಂತೆ ಹಲವು ವಿಭಾಗಗಳಲ್ಲಿ ರಾಮ್ ರಹೀಂ ತೊಡಗಿಸಿಕೊಂಡಿದ್ದರು. ಎಂಎಸ್ ಜಿ-2 ಬಳಿಕ ರಾಮ್ ರಹೀಂ ಆನ್ ಲೈನ್ ಗುರುಕುಲ್ ಎಂಬ ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಚಿತ್ರ ಹಾಲಿವುಡ್ ಬಾಲಿವುಡ್ ನಲ್ಲಿ ಈ ಹಿಂದೆಂದೂ ಕಂಡು ಕೇಳರಿಯದಂತೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರದ ಒಂದು ಮೋಷನ್ ಚಿತ್ರವನ್ನೂ ಕೂಡ ರಾಮ್ ರಹೀಂ ಬಿಡುಗಡೆ ಮಾಡಿದ್ದರು.
ಆದರೆ ಸಿಐಎಟಿಎಎ ಇದೀಗ ಅವರ ಪರವಾನಗಿಯನ್ನೇ ರದ್ದುಗೊಳಿಸಿದ್ದು, 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿರುವ ರಾಮ್ ರಹೀಂ ಇನ್ನು ಮುಂದೆ ಚಿತ್ರಗಳನ್ನು ಮಾಡುವಂತಿಲ್ಲ.