ಮಂತ್ರಶಕ್ತಿ

coverpage

ಸ್ನೇಹಿತನಿಂದ “ಮಂತ್ರಶಕ್ತಿ” ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ ಓದೋಣವೆಂದು ಅಪೂರ್ಣಗೊಳಿಸಿದ್ದ ಈ ಕಾದಂಬರಿ ತೆರೆದೆ ಓದುತ್ತಾ ಎಷ್ಟು ಕುತೂಹಲವಾಯಿತೆಂದರೆ ೨೫೦ ಪುಟಗಳ ಪುಸ್ತಕ ಮುಗಿದಿದ್ದೆ ತಿಳಿಯಲಿಲ್ಲ.

“ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು……”
“ಸದಾ ಮರವೇರಿ ಕುಳಿತರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ……”
“ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೋಬ್ಬಳು ಕಂಡುಕೇಳರಿಯದವನೋಬ್ಬನ ದುರಾಸೆಗೆ ಬಲಿಯಾದಳು….. ”
ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ.ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ,ನಾಗರಿಕತೆಯ ಹೆಸರಿನಲ್ಲಿ,ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಕ್ಕದ ಇಂಥ ಘಟನೆಗಳು ಅತೀಂದ್ರಿಯ ಲೋಕವೊಂದನ್ನು ಧ್ವನಿಸುತ್ತವೆ.ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಈ ಕೃತಿ ಒಂದು ಅರ್ಥದಲ್ಲಿ ಕಾದಂಬರಿ,ನಿಜ.ಆದರೆ ವ್ಯಾಪಕ ಅರ್ಥದಲ್ಲಿ ಸಂಕಲ್ಪ ಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥ.ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ ಎಂದು ಕರೆಯಲ್ಪಡುವ ಶ್ಯಾಮ್. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ,ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು.ನೇರವಾಗಿ ಕತೆ ಹೇಳುವ ಜಾಣ್ಮೆ, ಉದ್ದೇಶಿಸಿರುವುದಕ್ಕಿಂತ ಹೆಚ್ಚು ಧ್ವನಿಸುವ ಪಾರದರ್ಶಕ ಭಾಷೆ,ಪಾತ್ರಗಳ ಅಂತರಂಗವನ್ನು ನಿರಾಯಾಸವಾಗಿ ತೆರೆದಿಡಬಲ್ಲ ಕಲಾತ್ಮಕ ಅಭಿವ್ಯಕ್ತಿ -ಇವುಗಳಿಂದಾಗಿ ಈ ಕೃತಿ ಮತ್ತೆ ಮತ್ತೆ ಓದಬೇಕನ್ನಿಸುವ ಅನನ್ಯ ಕೃತಿಯೆನಿಸಿದೆ.ಇಲ್ಲಿ ನಿರೂಪಿತವಾಗಿರುವ ಘಟನೆಗಳು ಮೊದಲ ನೋಟಕ್ಕೆ ಹೆದರಿಕೆ ಹುಟ್ಟಿಸುವಂತಿದ್ದರೂ,ಪುಸ್ತಕ ಓದಿ ಮುಗಿಸಿದಾಗ ಮನಶ್ಯಕ್ತಿಯ ಸಾಧ್ಯತೆಗಳನ್ನು ಮನದಟ್ಟು ಮಾಡಿಕೊಡುವ ಅನುಭವ ಘಟಕಗಳಾಗಿಯೂ ಅವು ಕೆಲಸ ಮಾಡುತ್ತವೆ.ಲೇಖಕರ ಅತೀಂದ್ರಿಯ ಅನುಭವಗಳ ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರ ಒಂದು ವಾಹಕವಷ್ಟೆ.ಅತೀಂದ್ರಿಯ ಲೋಕವನ್ನು ಕಣ್ಣೆದುರು ತರುವ ಇಂದಿರಾತನಯರವರ “ಮಂತ್ರಶಕ್ತಿ” ಒಂದು ಉತ್ತಮ ಕಾದಂಬರಿಯಾಗಿದೆ.

 

 

 

READ MORE


ಸುಂದರ ಜೀವನಕ್ಕೆ ಕೆಲವು ಸೂತ್ರಗಳು

 

  1. ದಿನಾ 10-30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, 7 ಘಂಟೆಗಳ ಕಾಲ ನಿದ್ದೆ ಮಾಡಿ.
  2. ದಿನಾಲೂ ಪ್ರಾರ್ಥನೆ, ಧ್ಯಾನ ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಡವನ್ನು ಎದುರಿಸಲು ಇಂಧನದಂತೆ ಶಕ್ತಿ ನೀಡುತ್ತದೆ.
  3. ಶಕ್ತಿ, ಉತ್ಸಾಹ, ಸಂವೇದನಾಶೀಲತೆ ಇರಲಿ.
  4. ಧಾರಾಳವಾಗಿ ನೀರು ಕುಡಿಯಿರಿ. ಇಷ್ಟವಾದ ಆಟವಾಡಿ.
  5. ತಿಂಡಿ ರಾಜನಂತೆ ತಿನ್ನಿ. ಮಧ್ಯಾಹ್ನದ ಊಟ ರಾಣಿಯಂತೆ ತಿನ್ನಿ. ರಾತ್ರಿ ಊಟ ಭಿಕ್ಷುಕನಂತೆ ಇರಲಿ.
  6. ಕಾರ್ಖಾನೆಗಳಲ್ಲಿ ತಯಾರಾಗುವ ಆಹಾರಕ್ಕಿಂತ ಗಿಡಗಳಲ್ಲಿ ಬಿಡುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಿ.
  7. ಜಾಸ್ತಿ ಮುಗುಳುನಗಿ. ಹೆಚ್ಚೆಚ್ಚು ನಕ್ಕುಬಿಡಿ. ದಿನಾಲೂ ಕನಿಷ್ಟ 3 ಜನರಿಗಾದರೂ ಮುಗುಳುನಗೆ ಬೀರಿ.
  8. ಗಾಸಿಪ್ ಗಳಲ್ಲಿ ಕಾಲಕಳೆದು ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಆ ಶಕ್ತಿಯನ್ನು ಧನಾತ್ಮಕ ಚಿಂತನೆಗಳಿಗೆ ಬಳಸಿ.
  9. ಯಾರನ್ನೂ ದ್ವೇಷಿಸುವದರಲ್ಲಿ ಕಾಲ ಕೊಲ್ಲಬೇಡಿ. ಜೀವನ ಚಿಕ್ಕದು. ನಿಮ್ಮನ್ನು ಯಾರಿಗೂ ಹೋಲಿಸಿಕೊಳ್ಳಬೇಡಿ. ಯಾಕೆಂದರೆ ಅವರ ಪಯಣ ಎಲ್ಲೆಂದು ನಿಮಗೆ ತಿಳಿದಿಲ್ಲ.
  10. ದಿನಾಲೂ ಸ್ವಲ್ಪ ಸಮಯವಾದರೂ 70 ವರ್ಷಕ್ಕಿಂತ ಜಾಸ್ತಿ, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೊಡನೆ ಕಾಲ ಕಳೆಯಿರಿ.
  11. ಎಲ್ಲಾ ವಾದಗಳನ್ನೂ ಗೆಲ್ಲಬೇಕಿಂದಿಲ್ಲ. ಸೋತು ಗೆದ್ದುಬಿಡಿ.
  12. ನಿಮ್ಮ ಸಂಗಾತಿಗೆ ಅವರ ಹಿಂದಿನ ತಪ್ಪುಗಳನ್ನು ಜ್ಞಾಪಿಸಿ ನಿಮ್ಮ ಇಂದಿನ ಸಂತೋಷವನ್ನು ಕೊಲ್ಲಬೇಡಿ.
  13. ನಿಮ್ಮನ್ನು ನೀವೇ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಯಾಕೆಂದರೆ ಬೇರೆ ಯಾರೂ ನಿಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
  14. ಜೀವನ ಒಂದು ಶಾಲೆಯಿದ್ದಂತೆ. ಸಮಸ್ಯೆಗಳು ಬೀಜಗಣಿತದ ಲೆಕ್ಕಗಳಂತೆ ಕರಗಿ ಉತ್ತಮ ಪಾಠ ಕಲಿಸುತ್ತವೆ. ಸಮಸ್ಯೆಗಳನ್ನು ಉತ್ಸಾಹದಿಂದ ಎದುರಿಸಿ.
  15. ನಿಮ್ಮ ಉದ್ಯೋಗ ನಿಮ್ಮನ್ನು ನೀವು ನಿವೃತ್ತಿಯಾಗುವವರೆಗೂ ಕಾಯುವುದು. ನಿಮ್ಮ ಕುಟುಂಬ, ಸಂಬಂಧಿಗಳು ಮತ್ತು ಮಿತ್ರರು ಮಾತ್ರ ನಿಮ್ಮೊಡನೆ ಯಾವಾಗಲೂ ಇರುವವರು. ಅವರಿಗೆ ಯಾವಾಗಲೂ ಸಮಯ ಕೊಡಿ.
  16. ಎಲ್ಲರನ್ನೂ ಕ್ಷಮಿಸುತ್ತಾ, ಅವರ ತಪ್ಪುಗಳನ್ನು ಮರೆಯುತ್ತಾ ಮುಂದೆ ಸಾಗಿ.

 

READ MORE


ಕಳಪೆ ಗುಣಮಟ್ಟ: ಕರ್ನಾಟಕದ 20 ಎಂಜಿನಿಯರಿಂಗ್‌ ಕಾಲೇಜುಗಳಿಗೆ ಬೀಗ

ಬೆಂಗಳೂರು: ಕಳಪೆ ಗುಣಮಟ್ಟ, ಸಾಧನೆ ಹಾಗೂ ಎಂಜಿನಿಯರಿಂಗ್‌ ಬಗ್ಗೆ ವಿದ್ಯಾರ್ಥಿಗಳ ನಿರಾಸಕ್ತಿಯಿಂದ ನೋಂದಣಿ ಕಡಿಮೆಯಾಗಿರುವ 800 ಎಂಜಿನಿಯಿರಂಗ್‌ ಕಾಲೇಜುಗಳಿಗೆ ಬೀಗ ಬೀಳಲಿದೆ. ಈ ಪೈಕಿ ಕರ್ನಾಟಕದ 20 ಎಂಜಿನಿಯರಿಂಗ್‌ ಕಾಲೇಜುಗಳಿವೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧ್ಯಕ್ಷ ಅನಿಲ್‌ ದತ್ತಾತ್ರೇಯ ಸಹಸ್ರಬುದೆ ತಿಳಿಸಿದ್ದಾರೆ.

ಎಐಸಿಟಿಇಯ ಕಠಿಣ ನಿಯಮಗಳಿಂದಾಗಿ ವಾರ್ಷಿಕ 150ಕ್ಕೂ ಹೆಚ್ಚು ಕಾಲೇಜುಗಳು ಮುಚ್ಚಲಾಗಿದೆ. ಮೂಲ ಸೌಕರ್ಯ ಇಲ್ಲದ, ಸತತ ಐದು ವರ್ಷಗಳ ಕಾಲ ಶೇಕಡ 30ಕ್ಕಿಂತ ಕಡಿಮೆ ನೋಂದಣಿ ದಾಖಲಾಗಿರುವ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ಐಎಸಿಟಿಇ ವೆಬ್‌ಸೈಟ್‌ನಲ್ಲಿ 450ಕ್ಕೂ ಹೆಚ್ಚು ಕಾಲೇಜುಗಳ ಪಟ್ಟಿಯನ್ನು ನೀಡಲಾಗಿದೆ. ಈ ಪೈಕಿ ಕರ್ನಾಟಕದ 20ಕ್ಕೂ ಹೆಚ್ಚು ಕಾಲೇಜುಗಳಿವೆ.

ತೆಲಂಗಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ಗುಜರಾತ್‌ ಮತ್ತು ಮಧ್ಯಪ್ರದೇಶದ ಕಾಲೇಜುಗಳಿವೆ. ಬಹುತೇಕ ಖಾಸಗಿ ಕಾಲೇಜುಗಳೇ ಸ್ವಯಂ ಪ್ರೇರಿತವಾಗಿ ಮುಚ್ಚಲು ಅರ್ಜಿ ಸಲ್ಲಿಸಿವೆ ಎಂದು ಅನಿಲ್‌ ಮಾಹಿತಿ ನೀಡಿದ್ದಾರೆ.

ಎಂಜಿನಿಯರಿಂಗ್‌ ಕಾಲೇಜುಗಳ ಗುಣಮಟ್ಟ ಕಾಪಾಡಿಕೊಳ್ಳಲು ವಿಫಲರಾದ ನಂತರ ಅವುಗಳನ್ನು ಪಾಲಿಟೆಕ್ನಿಕ್‌ಗಳಾಗಿ ಅಥವಾ ವಿಜ್ಞಾನ, ಕಲಾ ಕಾಲೇಜುಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬಹುತೇಕ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಉಪನ್ಯಾಸಕರು ಭವಿಷ್ಯದ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜುಗಳಿಗೆ ಉಪನ್ಯಾಸಕರಾಗಿ ಸೇರ್ಪಡೆಯಾಗುವವರು ಕಡ್ಡಾಯವಾಗಿ 6 ತಿಂಗಳ ವಿಶೇಷ ತರಬೇತಿ ಪಡೆದಿರಬೇಕು. ಆಧುನಿಕ ಶಿಕ್ಷಣದ ತರಬೇತಿ ಹೊಂದಿರಬೇಕು ಎಂದು ಅನಿಲ್‌ ತಿಳಿಸಿದ್ದಾರೆ.

ಇದಲ್ಲದೇ ಕಾಲೇಜುಗಳಲ್ಲಿ ಕ್ಯಾಂಪಸ್‌ ಸಂದರ್ಶನ ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜಾಗುವಂತೆ ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿಯೂ ಕೆಲವು ಕಠಿಣ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎರಡನೇ ಅಥವಾ ಮೂರನೇ ವರ್ಷ ಓದುವ ವಿದ್ಯಾರ್ಥಿ ಕಡ್ಡಾಯವಾಗಿ ಇಂಟರ್ನ್‌ಷಿಪ್‌ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಆ ನಂತರ ಕ್ಯಾಂಪಸ್‌ ಸಂದರ್ಶನವನ್ನು ಸುಲಭವಾಗಿ ಎದುರಿಸಬಹುದು ಎಂದು ಅನಿಲ್‌ ಕಿವಿಮಾತು ಹೇಳಿದ್ದಾರೆ.

READ MORE