In National

ಶ್ರೀನಗರ: ಭಾರತೀಯ ಯೋಧ ಲೆಫ್ಟಿನೆಂಟ್ ಉಮರ್ ಫಯಾಜ್ ರನ್ನು ಅಪಹರಿಸಿ ಕೊಂದು ಹಾಕಿದ್ದ ಎಲ್ ಇಟಿ ಉಗ್ರ ಇಶ್ಫಾಕ್ ಪದ್ದರ್ ನನ್ನು ಶನಿವಾರ ಕುಲ್ಗಾಮ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.

ಕುಲ್ಗಾಮ್ ನ ತಂತ್ರಿಪೋರಾ ಗ್ರಾಮದ ಬಳಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಇಶ್ಫಾಕ್ ಪದ್ದರ್ ನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಇಶ್ಫಾಕ್ ಪದ್ದರ್ ಕಳೆದ ಮೇ 10ರಂದು ಬತ್ಪುರ ಗ್ರಾಮದಲ್ಲಿ 62 ರಾಷ್ಟ್ರೀಯ ರೈಫಲ್ಸ್ ವಿಭಾಗ 22 ವರ್ಷದ ಯೋಧ ಉಮರ್ ಫಯಾಜ್ ರನ್ನು ಅಪಹರಣ ಮಾಡಲಾಗಿತ್ತು. ಬಳಿಕ ಯೋಧನನ್ನು ಭೀಕರವಾಗಿ ಕೊಲೆಗೈದು ಬಿಸಾಡಲಾಗಿತ್ತು.

ಶೋಪಿಯಾನ್ ನ ಹರ್ಮೆನ್ ಪ್ರದೇಶದಲ್ಲಿ ಫಯಾಜ್ ಮೃತದೇಹ ಪತ್ತೆಯಾಗಿತ್ತು. ಇದೀಗ ಈ ಹತ್ಯೆಗೈದವರ ಪೈಕಿ ಓರ್ವನಾದ ಲಷ್ಕರ್ ಉಗ್ರ ಸಂಘನೆಯ ಕಮಾಂಡರ್ ಇಶ್ಫಾಕ್ ಪದ್ದರ್ ನನ್ನು ಹತ್ಯೆಗೈಯ್ಯಲಾಗಿದೆ. ಇನ್ನು ಕುಲ್ಗಾಮ್ ನಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Recent Posts

Leave a Comment