ಅತ್ಯಾಚಾರಿ ಬಾಬಾ ರಾಮ್ ರಾಹೀಮ್ ಸಿನಿಮಾ ಪರವಾನಗಿ ರದ್ದು!

ಮುಂಬೈ: ಅತ್ಯಾಚಾರಿ ಬಾಬಾ ರಾಮ್ ರಹೀಮ್ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಬಾಬಾ ರಾಮ್ ರಹೀಂ ಗೆ ಸಂಬಂಧಸಿದ ಸಿನಿಮಾ ಪರವಾನಗಿಯನ್ನು ಸಿನಿಮಾ, ಟಿವಿ ನಟ ಹಾಗೂ ನಿರ್ದೇಶಕರ ಸಂಘ ರದ್ದು ಮಾಡಿದೆ.

ಈ ಹಿಂದೆ ಎಂಎಸ್ ಜಿ, ಎಂಎಸ್ ಜಿ-2 ಚಿತ್ರಗಳು ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಬಾಬಾ ರಾಮ್ ರಹೀಂ ಅವರ ಪರವಾನಗಿಯನ್ನು ರದ್ದು ಮಾಡಿರುವುದಾಗಿ ಸಿನಿಮಾ, ಟಿವಿ ನಟ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ತಮ್ಮ ಚಿತ್ರಗಳಿಗೆ ತಾವೇ ಸಾಹಿತ್ಯ, ಸಂಗೀತ, ನಿರ್ದೇಶನ ಸೇರಿದಂತೆ ಹಲವು ವಿಭಾಗಗಳಲ್ಲಿ ರಾಮ್ ರಹೀಂ ತೊಡಗಿಸಿಕೊಂಡಿದ್ದರು. ಎಂಎಸ್ ಜಿ-2 ಬಳಿಕ ರಾಮ್ ರಹೀಂ ಆನ್ ಲೈನ್ ಗುರುಕುಲ್ ಎಂಬ ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಚಿತ್ರ ಹಾಲಿವುಡ್ ಬಾಲಿವುಡ್ ನಲ್ಲಿ ಈ ಹಿಂದೆಂದೂ ಕಂಡು ಕೇಳರಿಯದಂತೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರದ ಒಂದು ಮೋಷನ್ ಚಿತ್ರವನ್ನೂ ಕೂಡ ರಾಮ್ ರಹೀಂ ಬಿಡುಗಡೆ ಮಾಡಿದ್ದರು.

ಆದರೆ ಸಿಐಎಟಿಎಎ ಇದೀಗ ಅವರ ಪರವಾನಗಿಯನ್ನೇ ರದ್ದುಗೊಳಿಸಿದ್ದು, 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿರುವ ರಾಮ್ ರಹೀಂ ಇನ್ನು ಮುಂದೆ ಚಿತ್ರಗಳನ್ನು ಮಾಡುವಂತಿಲ್ಲ.

READ MORE


ಬಾಕ್ಸರ್ ಗೆಟಪ್ ನಲ್ಲಿ ಸುದೀಪ್: ವೈರಲ್ ಆಯ್ತು ಪೈಲ್ವಾನ್ ಸಿನಿಮಾ ಪೋಸ್ಚರ್

ಬೆಂಗಳೂರು: ವಿಲ್ಲನ್ ನಂತರ ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾದಲ್ಲಿ ಬಾಕ್ಸರ್ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗಿದ್ದು ವೈರಲ್ ಆಗಿದೆ. ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ್ ಬಾಕ್ಸಿಂಗ್‌ ಮತ್ತು ಕುಸ್ತಿ ಕುರಿತಾದ ಚಿತ್ರವಾಗಿದೆ.

ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೃಷ್ಣ ಪೈಲ್ವಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಸುದೀಪ್ ಗೆ ವಿದೇಶಿ ಫೈಟ್ ಮಾಸ್ಚರ್ ತರಬೇತಿ ನೀಡುತ್ತಿದ್ದಾರೆ

“ಪೈಲ್ವಾನ್‌’ ಚಿತ್ರವನ್ನು ಚಿತ್ರವನ್ನು ಆರ್‌.ಆರ್‌.ಆರ್‌. ಮೋಷನ್‌ ಪಿಕ್ಚರ್ ಬ್ಯಾನರ್‌ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ನಿರ್ಮಿಸುತ್ತಿದ್ದಾರೆ. ಇನ್ನು ನಿರ್ದೇಶನ ಮಾಡುವ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ರಚಿಸಿದ್ದಾರೆ. ಇದೊಂದು , ಅಕ್ಟೋಬರ್‌ ಕೊನೆಯಲ್ಲಿ ಚಿತ್ರ ಆರಂಭವಾಗಲಿದೆ.

ಈ ಚಿತ್ರಕ್ಕಾಗಿ ದಾವಣಗೆರೆ, ಹುಬ್ಬಳ್ಳಿ ಸುತ್ತಮುತ್ತ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಈಗಾಗಲೇ ಬ್ಯಾಂಕಾಕ್‌ನಲ್ಲಿ ಚಿತ್ರದ ಫೋಟೋ ಶೂಟ್‌ ಆಗಿದ್ದು, ಆ ಫೋಟೋ ಶೂಟ್‌ನಲ್ಲಿ ಕ್ಲಿಕ್ಕಿಸಲಾದ ಕೆಲವು ಫೋಟೋಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಇನ್ನು ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್‌ ಅವರು ಛಾಯಾಗ್ರಹಣ ಮಾಡಲಿದ್ದಾರೆ.

READ MORE