ಕಳಪೆ ಗುಣಮಟ್ಟ: ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ
ಬೆಂಗಳೂರು: ಕಳಪೆ ಗುಣಮಟ್ಟ, ಸಾಧನೆ ಹಾಗೂ ಎಂಜಿನಿಯರಿಂಗ್ ಬಗ್ಗೆ ವಿದ್ಯಾರ್ಥಿಗಳ ನಿರಾಸಕ್ತಿಯಿಂದ ನೋಂದಣಿ ಕಡಿಮೆಯಾಗಿರುವ 800 ಎಂಜಿನಿಯಿರಂಗ್ ಕಾಲೇಜುಗಳಿಗೆ ಬೀಗ ಬೀಳಲಿದೆ. ಈ ಪೈಕಿ ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿವೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಅಧ್ಯಕ್ಷ ಅನಿಲ್ ದತ್ತಾತ್ರೇಯ ಸಹಸ್ರಬುದೆ ತಿಳಿಸಿದ್ದಾರೆ.
ಎಐಸಿಟಿಇಯ ಕಠಿಣ ನಿಯಮಗಳಿಂದಾಗಿ ವಾರ್ಷಿಕ 150ಕ್ಕೂ ಹೆಚ್ಚು ಕಾಲೇಜುಗಳು ಮುಚ್ಚಲಾಗಿದೆ. ಮೂಲ ಸೌಕರ್ಯ ಇಲ್ಲದ, ಸತತ ಐದು ವರ್ಷಗಳ ಕಾಲ ಶೇಕಡ 30ಕ್ಕಿಂತ ಕಡಿಮೆ ನೋಂದಣಿ ದಾಖಲಾಗಿರುವ ಕಾಲೇಜುಗಳನ್ನು ಮುಚ್ಚಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಐಎಸಿಟಿಇ ವೆಬ್‌ಸೈಟ್‌ನಲ್ಲಿ 450ಕ್ಕೂ ಹೆಚ್ಚು ಕಾಲೇಜುಗಳ ಪಟ್ಟಿಯನ್ನು ನೀಡಲಾಗಿದೆ. ಈ ಪೈಕಿ ಕರ್ನಾಟಕದ 20ಕ್ಕೂ ಹೆಚ್ಚು ಕಾಲೇಜುಗಳಿವೆ.
ತೆಲಂಗಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ರಾಜಸ್ಥಾನ, ತಮಿಳುನಾಡು, ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶದ ಕಾಲೇಜುಗಳಿವೆ. ಬಹುತೇಕ ಖಾಸಗಿ ಕಾಲೇಜುಗಳೇ ಸ್ವಯಂ ಪ್ರೇರಿತವಾಗಿ ಮುಚ್ಚಲು ಅರ್ಜಿ ಸಲ್ಲಿಸಿವೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.
ಎಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಕಾಪಾಡಿಕೊಳ್ಳಲು ವಿಫಲರಾದ ನಂತರ ಅವುಗಳನ್ನು ಪಾಲಿಟೆಕ್ನಿಕ್‌ಗಳಾಗಿ ಅಥವಾ ವಿಜ್ಞಾನ, ಕಲಾ ಕಾಲೇಜುಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಉಪನ್ಯಾಸಕರು ಭವಿಷ್ಯದ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ವಿಫಲರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾಲೇಜುಗಳಿಗೆ ಉಪನ್ಯಾಸಕರಾಗಿ ಸೇರ್ಪಡೆಯಾಗುವವರು ಕಡ್ಡಾಯವಾಗಿ 6 ತಿಂಗಳ ವಿಶೇಷ ತರಬೇತಿ ಪಡೆದಿರಬೇಕು. ಆಧುನಿಕ ಶಿಕ್ಷಣದ ತರಬೇತಿ ಹೊಂದಿರಬೇಕು ಎಂದು ಅನಿಲ್ ತಿಳಿಸಿದ್ದಾರೆ.
ಇದಲ್ಲದೇ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜಾಗುವಂತೆ ರೂಪಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿಯೂ ಕೆಲವು ಕಠಿಣ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಎರಡನೇ ಅಥವಾ ಮೂರನೇ ವರ್ಷ ಓದುವ ವಿದ್ಯಾರ್ಥಿ ಕಡ್ಡಾಯವಾಗಿ ಇಂಟರ್ನ್‌ಷಿಪ್ ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಆ ನಂತರ ಕ್ಯಾಂಪಸ್ ಸಂದರ್ಶನವನ್ನು ಸುಲಭವಾಗಿ ಎದುರಿಸಬಹುದು ಎಂದು ಅನಿಲ್ ಕಿವಿಮಾತು ಹೇಳಿದ್ದಾರೆ.
READ MOREಅತ್ಯಾಚಾರಿ ಬಾಬಾ ರಾಮ್ ರಾಹೀಮ್ ಸಿನಿಮಾ ಪರವಾನಗಿ ರದ್ದು!
ಮುಂಬೈ: ಅತ್ಯಾಚಾರಿ ಬಾಬಾ ರಾಮ್ ರಹೀಮ್ ಗೆ ಮತ್ತೊಂದು ಶಾಕ್ ಎದುರಾಗಿದ್ದು, ಬಾಬಾ ರಾಮ್ ರಹೀಂ ಗೆ ಸಂಬಂಧಸಿದ ಸಿನಿಮಾ ಪರವಾನಗಿಯನ್ನು ಸಿನಿಮಾ, ಟಿವಿ ನಟ ಹಾಗೂ ನಿರ್ದೇಶಕರ ಸಂಘ ರದ್ದು ಮಾಡಿದೆ.
ಈ ಹಿಂದೆ ಎಂಎಸ್ ಜಿ, ಎಂಎಸ್ ಜಿ-2 ಚಿತ್ರಗಳು ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಬಾಬಾ ರಾಮ್ ರಹೀಂ ಅವರ ಪರವಾನಗಿಯನ್ನು ರದ್ದು ಮಾಡಿರುವುದಾಗಿ ಸಿನಿಮಾ, ಟಿವಿ ನಟ ಹಾಗೂ ನಿರ್ದೇಶಕರ ಸಂಘದ ಪದಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ತಮ್ಮ ಚಿತ್ರಗಳಿಗೆ ತಾವೇ ಸಾಹಿತ್ಯ, ಸಂಗೀತ, ನಿರ್ದೇಶನ ಸೇರಿದಂತೆ ಹಲವು ವಿಭಾಗಗಳಲ್ಲಿ ರಾಮ್ ರಹೀಂ ತೊಡಗಿಸಿಕೊಂಡಿದ್ದರು. ಎಂಎಸ್ ಜಿ-2 ಬಳಿಕ ರಾಮ್ ರಹೀಂ ಆನ್ ಲೈನ್ ಗುರುಕುಲ್ ಎಂಬ ಹೊಸ ಚಿತ್ರವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಚಿತ್ರ ಹಾಲಿವುಡ್ ಬಾಲಿವುಡ್ ನಲ್ಲಿ ಈ ಹಿಂದೆಂದೂ ಕಂಡು ಕೇಳರಿಯದಂತೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಈ ಚಿತ್ರದ ಒಂದು ಮೋಷನ್ ಚಿತ್ರವನ್ನೂ ಕೂಡ ರಾಮ್ ರಹೀಂ ಬಿಡುಗಡೆ ಮಾಡಿದ್ದರು.
ಆದರೆ ಸಿಐಎಟಿಎಎ ಇದೀಗ ಅವರ ಪರವಾನಗಿಯನ್ನೇ ರದ್ದುಗೊಳಿಸಿದ್ದು, 20 ವರ್ಷಗಳ ಜೈಲು ಶಿಕ್ಷೆ ಅನುಭವಿಸಿರುವ ರಾಮ್ ರಹೀಂ ಇನ್ನು ಮುಂದೆ ಚಿತ್ರಗಳನ್ನು ಮಾಡುವಂತಿಲ್ಲ.
READ MOREಬಾಕ್ಸರ್ ಗೆಟಪ್ ನಲ್ಲಿ ಸುದೀಪ್: ವೈರಲ್ ಆಯ್ತು ಪೈಲ್ವಾನ್ ಸಿನಿಮಾ ಪೋಸ್ಚರ್
ಬೆಂಗಳೂರು: ವಿಲ್ಲನ್ ನಂತರ ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾದಲ್ಲಿ ಬಾಕ್ಸರ್ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗಿದ್ದು ವೈರಲ್ ಆಗಿದೆ. ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ್ ಬಾಕ್ಸಿಂಗ್ ಮತ್ತು ಕುಸ್ತಿ ಕುರಿತಾದ ಚಿತ್ರವಾಗಿದೆ.
ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೃಷ್ಣ ಪೈಲ್ವಾನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಸುದೀಪ್ ಗೆ ವಿದೇಶಿ ಫೈಟ್ ಮಾಸ್ಚರ್ ತರಬೇತಿ ನೀಡುತ್ತಿದ್ದಾರೆ
“ಪೈಲ್ವಾನ್’ ಚಿತ್ರವನ್ನು ಚಿತ್ರವನ್ನು ಆರ್.ಆರ್.ಆರ್. ಮೋಷನ್ ಪಿಕ್ಚರ್ ಬ್ಯಾನರ್‌ನಡಿ ಸ್ವಪ್ನ ಕೃಷ್ಣ ಮತ್ತು ಕೃಷ್ಣ ನಿರ್ಮಿಸುತ್ತಿದ್ದಾರೆ. ಇನ್ನು ನಿರ್ದೇಶನ ಮಾಡುವ ಜೊತೆಗೆ ಕಥೆ ಹಾಗೂ ಚಿತ್ರಕಥೆಯನ್ನು ಕೃಷ್ಣ ರಚಿಸಿದ್ದಾರೆ. ಇದೊಂದು , ಅಕ್ಟೋಬರ್ ಕೊನೆಯಲ್ಲಿ ಚಿತ್ರ ಆರಂಭವಾಗಲಿದೆ.
ಈ ಚಿತ್ರಕ್ಕಾಗಿ ದಾವಣಗೆರೆ, ಹುಬ್ಬಳ್ಳಿ ಸುತ್ತಮುತ್ತ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆಯಂತೆ. ಈಗಾಗಲೇ ಬ್ಯಾಂಕಾಕ್‌ನಲ್ಲಿ ಚಿತ್ರದ ಫೋಟೋ ಶೂಟ್ ಆಗಿದ್ದು, ಆ ಫೋಟೋ ಶೂಟ್‌ನಲ್ಲಿ ಕ್ಲಿಕ್ಕಿಸಲಾದ ಕೆಲವು ಫೋಟೋಗಳನ್ನು ಇದೀಗ ಬಿಡುಗಡೆ ಮಾಡಲಾಗಿದೆ.
ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದರೆ, ಕರುಣಾಕರನ್ ಅವರು ಛಾಯಾಗ್ರಹಣ ಮಾಡಲಿದ್ದಾರೆ.
READ MOREಸಂಪುಟದಲ್ಲಿ ಗೀತಾ ಗೆ ಸ್ಥಾನ: ಸಿದ್ದರಾಮಯ್ಯ ರಾಜಕೀಯ ಚದುರಂಗದಾಟಕ್ಕೆ ವರದಾನ?
ಮೈಸೂರು: ಅಂತಿಮ ಕ್ಷಣದಲ್ಲಿ ತಿಪಟೂರು ಶಾಸಕ ಷಡಕ್ಷರಿ ಅವರನ್ನು ಕೈಬಿಟ್ಟು ತಮ್ಮ ಆಪ್ತ ಸ್ನೇಹಿತನ ಪತ್ನಿ ಗೀತಾ ಮಹಾದೇವ ಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಸಿದ್ದರಾಮಯ್ಯ ಅವರ ರಾಜಕೀಯ ಲೆಕ್ಕಾಚಾರದ ಭಾಗವಾಗಿದೆ. ಆದರೆ ಅವರು ಇದೇ ವೇಳೆ ಸ್ವಪಕ್ಷದವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ.
ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಪ್ರಚಾರದ ವೇಳೆ , ಗೀತಾ ಪ್ರಸಾದ್ ಅವರನ್ನು ಗೆಲ್ಲಿಸಿದರೇ ಗೀತಾ ಅವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದು ಸಿಎಂ ಹೇಳಿದ್ದರು. ಆ ವೇಳೆ ಸಿದ್ದರಾಮಯ್ಯ ಅವರ ಮಾತನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ,
ಸಂಪುಟ ವಿಸ್ತರಣೆ ವೇಳೆ ಹಿರಿಯ ಶಾಸಕ ಷಡಕ್ಷರಿ ಮತ್ತು ಬೆಳಗಾವಿ ಜಿಲ್ಲೆಯ ಅಶೋಕ್ ಪಟ್ಟಣ್ ಹೆಸರುಗಳು ಕೇಳಿ ಬಂದಿದ್ದವು. ಷಡಕ್ಷರಿ ಕೂಡ ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ.
ವೀರಶೈವ ಮಠ ಮತ್ತು ಕಾಂಗ್ರೆಸ್ ನಡುವೆ ಸೇತುವೆಯಾಗಿದ್ದ ಎಚ್ .ಎಸ್ ಮಹಾದೇವ ಪ್ರಸಾದ್ ನಿಧನದ ನಂತರ ಹಳೇ ಮೈಸೂರು ಭಾಗದಲ್ಲಿ ಪ್ರಬಲ ಲಿಂಗಾಯತ ನಾಯಕರ ಕೊರತೆಯಿತ್ತು. ಸಚಿವ ಸ್ಥಾನಕ್ಕೆ ಸಿಎಂ ಬೇರೆ ಲಿಂಗಾಯತ ಶಾಸಕರನ್ನು ನೇಮಿಸಬಹುದಿತ್ತು, ಆದರೆ ಮಹಿಳೆಯರಿಗೆ ಮತ್ತಷ್ಟು ಪ್ರಾತಿನಿಧ್ಯ ನೀಡುವ ಸಲುವಾಗಿ ಗೀತಾ ಅವರಿಗೆ ಸಚಿವ ಸ್ಛಾನ ನೀಡರುವುದಾಗಿ ಸಿಎಂ ಸಮರ್ಥಿಸಿಕೊಂಡಿದ್ದಾರೆ.
ವೀರಶೇವ-ಲಿಂಗಾಯತ ಸಮುದಾಯಗಳನ್ನು ವಿಭಿಜಿಸಲು ಸಿದ್ದರಾಮಯ್ಯ ಸರ್ಕಾರ ಯತ್ನಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಲು ಸಿಎಂ ಗೀತಾ ಅವರಿಗೆ ಸ್ಥಾನ ನೀಡಿದ್ದಾರೆ. ಜೆಎಸ್ ಎಸ್ ಮಠದ ಗುಡ್ ವಿಲ್ ಸಂಪಾದಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯಗೆ ಗೀತಾ ಅವರ ಸಂಪುಟ ಸೇರ್ಪಡೆ ವರದಾನವಾಗಲಿದೆ ಎಂದು ಭಾವಿಸಲಾಗಿದೆ.ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜೆಎಸ್ ಎಸ್ ಮಠ ಹೆಚ್ಚಿನ ಪ್ರಾಬಲ್ಯ ಹೊಂದಿದೆ.
ಮಠಗಳ ಆಶೀರ್ವಾದವಿದ್ದರೇ ತಮ್ಮ ಪುತ್ರ ಯತೀಂದ್ರನ ರಾಜಕೀಯ ಹಾದಿ ಸುಗುಮವಾಗಲಿದೆ ಎಂಬುದು ಸಿಎಂ ನಂಬಿಕೆ. ವರುಣಾ ಕ್ಷೇತ್ರದಿಂದ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಯತೀಂದ್ರ ಸಿದ್ಧತೆ ನಡೆಸಿದ್ದಾರೆ. ವರುಣಾ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಪ್ರಾಬಲ್ಯವಿದೆ, ಇನ್ನೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದು, ಲೋಕೋಪಯೋಗಿ ಸಚಿವ ಮಹಾದೇವಪ್ಪ ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ವೀರಶೈವರ ಬೆಂಬಲ ಪಡೆದಿರುವ ಶಾಸಕ ಷಡಕ್ಷರಿ ಅವರನ್ನು ಸಿಎಂ ನಿರ್ಲಕ್ಷ್ಯಿಸಿಲ್ಲ.
ಗೀತಾ ಮಹಾದೇವ ಪ್ರಸಾದ್ ಮುಂದಿದೆ ದೊಡ್ಡ ಸವಾಲು
ಸಂಪುಟಕ್ಕೆ ಸೇರಿರುವ ಗೀತಾ ಮಹಾದೇವ ಪ್ರಸಾದ್ ಅವರ ಹಾದಿ ಮುಳ್ಳಿನ ಹಾಸಿಗೆಯಾಗಿಲ್ಲ, ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅರು ನಿರೀಕ್ಷೆಯಂತೆ ಗೀತಾ ಕೆಲಸ ಮಾಡುವ ಅನಿವಾರ್ಯತೆ ಎದುರಾಗಿದೆ. ಮುಂದಿನ 7 ತಿಂಗಳಲ್ಲಿ ಪ್ರಬಲ ಲಿಂಗಾಯತ ಮಖಂಡ ಎಂದು ಗುರುತಿಸಿಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಶಕ್ತಿಯನ್ನು ಹಳೇಯ ಮೈಸೂರು ಭಾಗದಲ್ಲಿ ಕಡಿಮೆ ಮಾಡುವ ದೊಡ್ಡ ಸವಾಲು ಗೀತಾ ಮುಂದಿದೆ. ಒಂದು ವೇಳೆ ಇದರಲ್ಲಿ ಗೀತಾ ವಿಫಲವಾದರೇ ಸಿದ್ದರಾಮಯ್ಯ ಅವರ ಚಾಣಾಕ್ಷ ನಡೆಗೆ ಯಾವುದೇ ಲಾಭವಿರುವುದಿಲ್ಲ ಎಂದು ರಾಜಕೀಯ ವಿಮರ್ಶಕ ಪ್ರೊ. ಮುಜಾಫರ್ ಆಸಾದಿ ಹೇಳಿದ್ದಾರೆ.
ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವುದಕ್ಕೆ ಷಡಕ್ಷರಿ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಾನು 1980 ರಿಂದ ಕಾಂಗ್ರೆಸ್ ನಲ್ಲಿದ್ದೇನೆ, ಎರಡು ಬಾರಿ ಶಾಸಕನಾಗಿದ್ದೇನೆ, ಈ ಸಂಬಂಧ ಸಿಎಂ ನನ್ನ ಬಳಿ ಚರ್ಚಿಸಿದ್ದರು. ನಾನು ಸಂಪುಟಕ್ಕೆ ಸೇರಬೇಕಿತ್ತು. ನನಗೆ ಸ್ಥಾನ ಸಿಕ್ಕಿಲ್ಲ, ಆದರೆ ನಾನು ನಿರಾಶೆಗೊಂಡಿಲ್ಲ ಎಂದು ಶಾಸಕ ಷಡಕ್ಷರಿ ಹೇಳಿದ್ದಾರೆ. ಮೊದಲ ಬಾರಿಗೆ ಶಾಸಕಿಯಾಗಿರುವ ಗೀತಾ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿರುವುದಕ್ಕೆ ಮಾಜಿ ಸಚಿವರು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.
READ MOREಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ: ಮಾಜಿ ನಾಯಕನನ್ನು ಶ್ಲಾಘಿಸಿದ ಕೋಚ್ ರವಿಶಾಸ್ತ್ರಿ
ಕೊಲಂಬೋ: ಭಾರತ ತಂಡದ ವಿಕೆಟ್ ಕೀಪರ್ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಳಿ ಇನ್ನೂ ಸಾಕಷ್ಟು ಕ್ರಿಕೆಟ್ ಇದ್ದು, ಧೋನಿ ದೇಶದ ಲೆಜೆಂಡ್ ಆಟಗಾರರಲ್ಲಿ ಒಬ್ಬರು, ಅವರ ಸೇವೆ ಇನ್ನೂ ತಂಡಕ್ಕೆ ಬೇಕಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯ ಗೆಲುವಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಶಾಸ್ತ್ರಿ, ಭಾರತ ಕ್ರಿಕೆಟ್ ಕ್ಷೇತ್ರದ ಲೆಜೆಂಡ್ ಆಟಗಾರರಲ್ಲಿ ಧೋನಿ ಕೂಡ ಒಬ್ಬರು. ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಕ್ರಿಕೆಟ್ ರಂಗದಲ್ಲಿ ಧೋನಿ ಇನ್ನೂ ಅರ್ಧದಷ್ಟು ದಾರಿಯನ್ನು ಪೂರ್ಣಗೊಳಿಸಿಲ್ಲ ಎಂದು ಹೇಳುವ ಮೂಲಕ 2019ರ ವಿಶ್ವಕಪ್ ತಂಡದಲ್ಲಿ ಧೋನಿ ಇರುತ್ತಾರೆ ಎಂಬುದನ್ನು ರವಿಶಾಸ್ತ್ರಿ ಪರೋಕ್ಷವಾಗಿ ಸೂಚಿಸಿದ್ದಾರೆ. ಅಂತೆಯೇ ಧೋನಿ ದೇಶಕಂಡ ಅತ್ಯುತ್ತಮ ವಿಕೆಟ್ ಕೀಪರ್ ಗಳಲ್ಲಿ ಒಬ್ಬರಾಗಿದ್ದು, ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಬಿಟ್ಟರೂ ಅವರ ಕೀಪಿಂಗ್ ಸಾಮರ್ಥ್ಯವೇ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವಂತೆ ಮಾಡುತ್ತದೆ. ನಾ ಕಂಡಂತೆ ವಿಕೆಟ್ ಕೀಪಿಂಗ್ ನಲ್ಲಿ ಧೋನಿ ಪರ್ಯಾಯವೇ ಇಲ್ಲ ಎಂಬಂತಾಗಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.
ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಕೂಡ ತಮ್ಮ 36ನೇ ವಯಸ್ಸಿನಲ್ಲಿ ತಂಡದಲ್ಲಿದ್ದರು. ಅವರನ್ನು ಬದಲಿಸಲು ಸಾಧ್ಯವಾಗಿತ್ತೆ. ಅವರಲ್ಲಿ ಸಾಕಷ್ಟು ಕ್ರಿಕೆಟ್ ಇತ್ತು. ಧೋನಿಯಲ್ಲೂ ಕೂಡ ಇನ್ನೂ ಸಾಕಷ್ಟು ಕ್ರಿಕೆಟ್ ಇದೆ. ಭಾರತ ತಂಡದ ಮೇಲೆ ಧೋನಿ ಅವರು ತುಂಬಾ ಪ್ರಭಾವ ಬೀರಿದ್ದು, ಡ್ರೆಸಿಂಗ್ ರೂನಲ್ಲಿ ಧೋನಿ ಲೆಜೆಂಡ್ ಆಟಗಾರ. 2019ರ ವಿಶ್ವಕಪ್ ಟೂರ್ನಿಯವರೆಗೂ ತಂಡದಲ್ಲಿ ಸಾಕಷ್ಟು ಯೋಜನೆ ರೂಪಿಸಲಾಗುತ್ತದೆ. ತಮ್ಮ ಯೋಜನೆಯಲ್ಲಿ ಧೋನಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ ಎಂದು ಶಾಸ್ತ್ರಿ ಹೇಳಿದರು.
ಇದೇ ವೇಳೆ 2019ರ ವಿಶ್ವಕಪ್ ಟೂರ್ನಿಯ ಕುರಿತು ಮಾತನಾಡಿದ ಶಾಸ್ತ್ರಿ, ತಂಡದಲ್ಲಿನ ರೊಟೇಶನ್ ಪದ್ಧತಿಯನ್ನು ಮುಂದುವರೆಸಲಾಗುತ್ತದೆ. ಆ ಮೂಲಕ ತಂಡದ ಪ್ರತೀಯೊಬ್ಬ ಆಟಗಾರನ ಸಾಮರ್ಥ್ಯವನ್ನು ಪರೀಕ್ಷೆಗೆ ಹಚ್ಚಬೇಕಿದೆ. ಪ್ರಸ್ತುತ ಏಕದಿನ ಮಾದರಿಯ ಕ್ರಿಕೆಟ್ ನಲ್ಲಿ ನಮ್ಮ ತಂಡ ಸೋಲು-ಗೆಲುವಿನ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ತಂಡದ ಪ್ರತಿಯೊಬ್ಬ ಆಟಗಾರನ ಫಿಟ್ನೆಸ್ ಹಾಗೂ ಫಾರ್ಮ್ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಲಾಗುತ್ತದೆ. ತಂಡದಲ್ಲಿ ಎಲ್ಲ ಬಗೆಯ ಪ್ರಯೋಗ ಮಾಡಲಾಗುತ್ತದೆ. ಯಾವ ಆಟಗಾರ ಯಾವ ಶ್ರೇಣಿಯಲ್ಲಿ ಬ್ಯಾಟಿಂಗ್ ಮಾಡಬಲ್ಲ. ಯಾವ ಬೌಲರ್ ವಿಕೆಟ್ ಪಡೆಯಬಲ್ಲ ಎಂಬ ವಿಚಾರವಾಗಿ ಪ್ರಯೋಗಗಳು ನಿರಂತರವಾಗಿ ಸಾಗುತ್ತದೆ.
ಆಟಗಾರರು ಮಾಡುವ ತಪ್ಪಿನಿಂದಾಗಿಯೇ ಅವರು ಸ್ಥಾನ ಕಳೆದುಕೊಂಡು ಇತರೆ ಆಟಗಾರರಿಗೆ ಸ್ಥಾನ ಬಿಟ್ಟುಕೊಡುವಂತಾಗುತ್ತದೆ ಎಂದು ಹೇಳುವ ಮೂಲಕ ಆಟಗಾರರಿಗೆ ಶಾಸ್ತ್ರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಟ್ಟಾರೆ 2019ರ ವಿಶ್ವಕಪ್ ಮೇಲೆ ಕಣ್ಣು ನೆಟ್ಟಿರುವ ಕೋಚ್ ರವಿಶಾಸ್ತ್ರಿ ಆ ನಿಟ್ಟಿನಲ್ಲಿ ತಂಡ ರಚನೆಗೆ ಮುಂದಾಗಿದ್ದು, ಶ್ರೀಲಂಕಾ ಸರಣಿಯಲ್ಲಿ ಸಾಕಷ್ಟು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.
READ MOREಲೆಫ್ಟಿನೆಂಟ್ ಉಮರ್ ಫಯಾಜ್ ಕೊಂದಿದ್ದ ಉಗ್ರ ಎನ್ ಕೌಂಟರ್ ನಲ್ಲಿ ಬಲಿ!
ಶ್ರೀನಗರ: ಭಾರತೀಯ ಯೋಧ ಲೆಫ್ಟಿನೆಂಟ್ ಉಮರ್ ಫಯಾಜ್ ರನ್ನು ಅಪಹರಿಸಿ ಕೊಂದು ಹಾಕಿದ್ದ ಎಲ್ ಇಟಿ ಉಗ್ರ ಇಶ್ಫಾಕ್ ಪದ್ದರ್ ನನ್ನು ಶನಿವಾರ ಕುಲ್ಗಾಮ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ.
ಕುಲ್ಗಾಮ್ ನ ತಂತ್ರಿಪೋರಾ ಗ್ರಾಮದ ಬಳಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಇಶ್ಫಾಕ್ ಪದ್ದರ್ ನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ತಿಳಿದುಬಂದಿದೆ. ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಆಗಿದ್ದ ಇಶ್ಫಾಕ್ ಪದ್ದರ್ ಕಳೆದ ಮೇ 10ರಂದು ಬತ್ಪುರ ಗ್ರಾಮದಲ್ಲಿ 62 ರಾಷ್ಟ್ರೀಯ ರೈಫಲ್ಸ್ ವಿಭಾಗ 22 ವರ್ಷದ ಯೋಧ ಉಮರ್ ಫಯಾಜ್ ರನ್ನು ಅಪಹರಣ ಮಾಡಲಾಗಿತ್ತು. ಬಳಿಕ ಯೋಧನನ್ನು ಭೀಕರವಾಗಿ ಕೊಲೆಗೈದು ಬಿಸಾಡಲಾಗಿತ್ತು.
ಶೋಪಿಯಾನ್ ನ ಹರ್ಮೆನ್ ಪ್ರದೇಶದಲ್ಲಿ ಫಯಾಜ್ ಮೃತದೇಹ ಪತ್ತೆಯಾಗಿತ್ತು. ಇದೀಗ ಈ ಹತ್ಯೆಗೈದವರ ಪೈಕಿ ಓರ್ವನಾದ ಲಷ್ಕರ್ ಉಗ್ರ ಸಂಘನೆಯ ಕಮಾಂಡರ್ ಇಶ್ಫಾಕ್ ಪದ್ದರ್ ನನ್ನು ಹತ್ಯೆಗೈಯ್ಯಲಾಗಿದೆ. ಇನ್ನು ಕುಲ್ಗಾಮ್ ನಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
READ MOREತಿರುಪತಿ ತಿಮ್ಮಪ್ಪನ ದರ್ಶನ ಪಡೆದ ರಾಷ್ಟ್ರಪತಿ ಕೋವಿಂದ್
ತಿರುಪತಿ: ಸಕುಟುಂಬ ಸಹಿತ ಇಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪತ್ನಿ ಸವಿತಾ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ಶುಕ್ರವಾರವೇ ಇಲ್ಲಿಗೆ ಆಗಮಿಸಿದ್ದ ಕೋವಿಂದ್, ಸಮೀಪದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.
ಜುಲೈನಲ್ಲಿ ದೇಶದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕೋವಿಂದ್, ಅಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ಕೋವಿಂದ್ ಅವರೊಡನೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ರಾಜ್ಯಪಾಲರಾದ ಇ.ಎಸ್.ಎಲ್.ನರಸಿಂಹನ್ ಇದ್ದರು. ದೇವಸ್ಥಾನದ ಪ್ರವೇಶ ದ್ವಾರದಿಂದ ಗರ್ಭಗುಡಿಯವರೆಗೆ ಸಾಂಪ್ರದಾಯಿಕವಾಗಿ ವೇದ, ಮಂತ್ರ ಘೋಷಗಳೊಂದಿಗೆ ರಾಷ್ಟ್ರಪತಿಯನ್ನು ಬರಮಾಡಿಕೊಳ್ಳಲಾಯಿತು. ಸುಮಾರು 2000 ವರ್ಷ ಪುರಾತನವಾದ ದೇವಸ್ಥಾನದಲ್ಲಿ ಕೋವಿಂದ್ ವಿಶೇಷ ಪೂಜೆ ಸಲ್ಲಿಸಿದರು.
ವರಾಹ ಸ್ವಾಮಿ ಮಂದಿರ ಹಾಗೂ ದೇವಿ ಪದ್ಮಾವತಿ ಮಂದಿರಕ್ಕೂ ಕೋವಿಂದ್ ಭೇಟಿ ನೀಡಿದ್ದರು.
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
ತಾಜಾ ಸುದ್ದಿಗಾಗಿ ವಿಕ ಫೇಸ್‌ಬುಕ್ ಪುಟ ಲೈಕ್ ಮಾಡಿ.
READ MORE