ತಿರುಪತಿ: ಸಕುಟುಂಬ ಸಹಿತ ಇಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಸವಿತಾ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ಶುಕ್ರವಾರವೇ ಇಲ್ಲಿಗೆ ಆಗಮಿಸಿದ್ದ ಕೋವಿಂದ್, ಸಮೀಪದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಜುಲೈನಲ್ಲಿ ದೇಶದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕೋವಿಂದ್, ಅಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಕೋವಿಂದ್ ಅವರೊಡನೆ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಮತ್ತು ರಾಜ್ಯಪಾಲರಾದ ಇ.ಎಸ್.ಎಲ್.ನರಸಿಂಹನ್ ಇದ್ದರು. ದೇವಸ್ಥಾನದ ಪ್ರವೇಶ ದ್ವಾರದಿಂದ ಗರ್ಭಗುಡಿಯವರೆಗೆ ಸಾಂಪ್ರದಾಯಿಕವಾಗಿ ವೇದ, ಮಂತ್ರ ಘೋಷಗಳೊಂದಿಗೆ ರಾಷ್ಟ್ರಪತಿಯನ್ನು ಬರಮಾಡಿಕೊಳ್ಳಲಾಯಿತು. ಸುಮಾರು 2000 ವರ್ಷ ಪುರಾತನವಾದ ದೇವಸ್ಥಾನದಲ್ಲಿ ಕೋವಿಂದ್ ವಿಶೇಷ ಪೂಜೆ ಸಲ್ಲಿಸಿದರು.

ವರಾಹ ಸ್ವಾಮಿ ಮಂದಿರ ಹಾಗೂ ದೇವಿ ಪದ್ಮಾವತಿ ಮಂದಿರಕ್ಕೂ ಕೋವಿಂದ್ ಭೇಟಿ ನೀಡಿದ್ದರು.
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ತಾಜಾ ಅಪ್‌ಡೇಟ್ಸ್ ಪಡೆಯುತ್ತಾ ಇರಿ
ತಾಜಾ ಸುದ್ದಿಗಾಗಿ ವಿಕ ಫೇಸ್‌ಬುಕ್ ಪುಟ ಲೈಕ್ ಮಾಡಿ.

 

Recent Posts

Leave a Comment